UGC Approved Journal no 63975(19)
New UGC Peer-Reviewed Rules

ISSN: 2349-5162 | ESTD Year : 2014
Volume 13 | Issue 3 | March 2026

JETIREXPLORE- Search Thousands of research papers



WhatsApp Contact
Click Here

Published in:

Volume 8 Issue 8
August-2021
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2108018


Registration ID:
313449

Page Number

a127-a132

Share This Article


Jetir RMS

Title

UTTARA KARNATAKA JANAPADA KATHEGALU : GRAMEENA SAMBANDHAGALU

Authors

Abstract

'ಮುಂಬೈ ಕರ್ನಾಟಕ’ ಮತ್ತು ’ಹೈದ್ರಾಬಾದ್ ಕರ್ನಾಟಕ’ ಪ್ರದೇಶಗಳು ವಿಶಿಷ್ಟ ಭಾಷೆ, ಸಂಸ್ಕೃತಿ, ಕಲೆಗಳಿಂದ ಪ್ರಭಾವಕ್ಕೊಳಪಟ್ಟು, ಸಂಕೀರ್ಣವಾಗಿವೆ. ವೈವಿಧ್ಯತೆಗಳು ಒಂದಡೆ ಕಸಿಗೊಂಡಿವೆ. ಕೆಲವು ಮಿತಿಗಳಾಚೆ, ಸಾಂಸ್ಕೃತಿಕ ಬದುಕು ಕುಸುವಿನಿಂದ ಕೂಡಿದೆ. ಕಳೆದ ಎರಡು ದಶಕಗಳಲ್ಲಿ ಹೆಚ್ಚಿದ ’ಕೂಲಿ ವಲಸೆ’ಯು ಇಲ್ಲಿನ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಪರಿಣಾಮವನ್ನು ಬೀರುತ್ತಿದೆ. ಸಿಂಪಿ ಲಿಂಗಣ್ಣನವರು ಸಂಪಾದಿಸಿರುವ ’ಉತ್ತರ ಕರ್ನಾಟಕ ಜನಪದ ಕಥೆಗಳು’ ಸಂಕಲನದಲ್ಲಿ ೭೮ ಕಥೆಗಳಿವೆ. ಸಿಂಪಿ ಅವರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಕೇಳಿದ, ದಾಖಲಿಸಿದ ಕಥೆಗಳಿವು. ಕಥೆಗಳ ವಸ್ತು ಮತ್ತು ಉದ್ದೇಶಗಳ ಹಿನ್ನೆಲೆಯಲ್ಲಿ ’ರಮ್ಯ ಕಥೆಗಳು’, ’ಅತಿಮಾನುಷ ಕಥೆಗಳು’, ’ವಾಸ್ತವಿಕ ಕಥೆಗಳು’, ’ಬುದ್ಧಿವಂತಿಕೆಯ ಕಥೆಗಳು’, ’ವಿವರಣಾತ್ಮಕ ಕಥೆಗಳು’, ’ನೀತಿ ಕಥೆಗಳು’, ’ಪ್ರಾಣಿ ಕಥೆಗಳು’, ’ವಿನೋದ ಕಥೆಗಳು’ ಎಂದು ಎಂಟು ವಿಧಗಳಲ್ಲಿ ವಿಂಗಡಿಸಿದ್ದಾರೆ. ಸಾಮಾನ್ಯವಾಗಿ ಟಿವಿ ಚಾನಲ್‌ಗಳಿಗೆ, ಧಾರಾವಾಹಿಗಳಿಗೆ ಮನರಂಜನೆಯನ್ನು ಕೊಡುವುದೇ ಪರಮ ಧ್ಯೇಯವಾಗಿದೆ ಅಂದುಕೊಳ್ಳಬಹುದು. ಆದರೆ ಮನರಂಜನೆ ಕೊಡಲು ಬಂಡವಾಳವನ್ನು ಹೂಡುವವರ ಉದ್ದೇಶ ಇದಾಗಿರುವುದಿಲ್ಲ. ಮಾರ್ಕೆಟಿಂಗ್ ಥಿಯರಿ ಆಧಾರದ ಮೇಲೆ ಸಾಮೂಹಿಕ ಕಥನ ಸೃಷ್ಟಿಯ ನಿರಂತರೆಯನ್ನು ತಡೆಯುತ್ತಿದ್ದಾರೆ. ಹಾಗಾಗಿಯೇ ಒಂದು ಕಥೆ, ಹಲವು ಕಥೆಗಳು ಮೊಳೆವ ಮೊದಲೇ ನಾಶಪಡಿಸುತ್ತಿದೆ. ಉತ್ತರ ಕರ್ನಾಟಕದ ಜನಪದ ’ವಾಸ್ತವಿಕ ಕಥೆಗಳು’ ಹೆಚ್ಚಾಗಿ ಸ್ತ್ರೀ ಪ್ರಧಾನ ತಲೆಬರೆಹಗಳನ್ನೇ ಹೊಂದಿವೆ. ಮಾನವ ಸಂಬಂಧಗಳು ಮುರಿದು ಬೀಳುತ್ತಿರುವ ಸಂಗತಿಗಳನ್ನು ನಿರೂಪಿಸಿವೆ. ಇವುಗಳು ನಮ್ಮ ಗ್ರಾಮೀಣ ಮತ್ತು ನಗರ ಜೀವನಗಳಿಗೂ ಅನ್ವಯವಾಗುತ್ತವೆ. ಕಥೆಗಳು ಗ್ರಾಮೀಣ ಜಗತ್ತಿನೊಳಗಿನ ತೀರ ಖಾಸಗಿ ಸಂಬಂಧಗಳ ಕಲಹಗಳನ್ನು ದಾಖಲಿಸುತ್ತವೆ. ವಿವಿಧ ಪಾತ್ರಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವಂತೆ, ಮನಶಾಸ್ತ್ರೀಯವಾಗಿ ವಿಶ್ಲೇಷಿಸುವ ಅವಕಾಶವನ್ನು ತೆರೆದಿಟ್ಟಿವೆ. ಹೆಣ್ಣನ್ನು ಸಂಬಂಧಗಳ ಪೋಷಕಿ ಮತ್ತು ನಾಶಕಿಯಂತೆ ಚಿತ್ರಿಸಲಾಗಿದೆ. ಈ ಜನಪದ ಕಥೆಗಳು ಲೌಕಿಕ ಜಗತ್ತಿನ ವ್ಯವಹಾರಗಳಿಗೆ, ಅಗತ್ಯತೆಗಳಿಗೆ ಮಹತ್ವ ಕೊಡುತ್ತವೆ. ಕಥೆಗಳು ಮಾತೃಪ್ರಧಾನ ಕುಟುಂಬಗಳನ್ನು ಚಿತ್ರಿಸುವಂತೆ ಭಾಸವಾಗುತ್ತವೆ. ಇಲ್ಲಿ ಗಂಡಿನ ಪಾತ್ರಗಳ ಸಣ್ಣತನಗಳನ್ನು ಅನಾವರಣಗೊಳಿಸುತ್ತವೆ. ಸಂಪತ್ತಿನ ಮತ್ತು ಹೆಣ್ಣಿನ ಆಳ್ವಿಕೆಯನ್ನು ಗಂಡಿಗೆ ನೀಡುತ್ತವೆ. ಹೀಗೆ ಪುರುಷ ಪ್ರಧಾನ ವ್ಯವಸ್ಥೆಯು ನಿಧಾನಕ್ಕೆ ಬೇರುಬಿಟ್ಟುಕೊಳ್ಳುವ ನೆಲೆಗಳನ್ನು ಸೂಕ್ಷ್ಮವಾಗಿ ಹೊರಹಾಕುತ್ತವೆ. ನೊಂದವರಿಗೆ, ಕಷ್ಟಪಟ್ಟವರಿಗೆ ಒಳ್ಳೆಯದಾಗುತ್ತದೆಂಬ ಆಶಯವನ್ನು ಹೊಂದಿವೆ. ಕೆಲವು ಕಥೆಗಳು ಹೆಣ್ಣು ದುಃಖಿಸಬಾರದು ಅಥವಾ ಕಣ್ಣೀರು ಹಾಕಬಾರದೆಂದು ನಿರೂಪಿಸುತ್ತವೆ. ಆದರೆ ಅವಳ ದುಃಖವನ್ನೇ ಕಥೆಯನ್ನಾಗಿಸಿ, ಕೊನೆಗೆ ಸುಖಾಂತ್ಯಗೊಳಿಸುವ ಕಥೆಗಳು ಹೆಚ್ಚಿವೆ. ಈ ದ್ವಿಮುಖತೆ ಜನಪದ ಕಥಾ ಮಾದರಿಗಳಲ್ಲಿ ಒಂದಾಗಿದ್ದು ಸಮಾಜದೊಳಗಿನ ಕೌಟುಂಬಿಕ ಪದರುಗಳನ್ನು ಸಮರ್ಥವಾಗಿ ನೆಯ್ದಿವೆ.

Key Words

ಅತ್ತೆ-ಸೊಸೆಯರ ಕಲಹ, ಸುಖ-ದುಃಖಗಳ ಸಮರಸವೇ ಜೀವನ, ’ಅಳಿಯ ಮನೆ ತೊಳಿಯ’ , ಅಂತರ್‌ದೃಷ್ಟಿಯ ಅನಾರೋಗ್ಯ ,’ಕುದುರೆ’ ಹತ್ತಿದ ಕ್ಷಣಕ್ಕೆ ಬೀಗಬಾರದು'

Cite This Article

"UTTARA KARNATAKA JANAPADA KATHEGALU : GRAMEENA SAMBANDHAGALU", International Journal of Emerging Technologies and Innovative Research (www.jetir.org), ISSN:2349-5162, Vol.8, Issue 8, page no.a127-a132, August-2021, Available :http://www.jetir.org/papers/JETIR2108018.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"UTTARA KARNATAKA JANAPADA KATHEGALU : GRAMEENA SAMBANDHAGALU", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.8, Issue 8, page no. ppa127-a132, August-2021, Available at : http://www.jetir.org/papers/JETIR2108018.pdf

Publication Details

Published Paper ID: JETIR2108018
Registration ID: 313449
Published In: Volume 8 | Issue 8 | Year August-2021
DOI (Digital Object Identifier):
Page No: a127-a132
Country: DHARWAD, KARNATAKA, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

0001102

Print This Page

Current Call For Paper

Jetir RMS