UGC Approved Journal no 63975(19)
New UGC Peer-Reviewed Rules

ISSN: 2349-5162 | ESTD Year : 2014
Volume 13 | Issue 9 | September 2026

JETIREXPLORE- Search Thousands of research papers



WhatsApp Contact
Click Here

Published in:

Volume 13 Issue 9
September-2026
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2609028


Registration ID:
585668

Page Number

a237-a244

Share This Article


Jetir RMS

Title

ಮಾಸ್ರಿಯವರ ಆಯ್ದ ಸಣ್ಣಕಥೆಗಳ ಆಶಯ ಮತ್ತು ವಿಶ್ಲೇಷಣೆ

Authors

Abstract

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣಕಥಾ ಪ್ರಕಾರಕ್ಕೆ ವಿಶಿಷ್ಟ ಪರಂಪರೆ ಇದೆ. ಚಾರಿತ್ರಿಕ ಸಾಂಸ್ಕೃತಿಕ ಒತ್ತಡ ಹಾಗೂ ಸಂಘರ್ಷದ ನಡುವೆ ಸೃಷ್ಟಿಯಾದ ಆಧುನಿಕ ಕಥಾ ಸಾಹಿತ್ಯ ಸ್ವಾತಂತ್ರ್ಯದ ಪೂರ್ವಘಟ್ಟದ ನಾಲ್ಕು ದಶಕಗಳಲ್ಲಿ ಮಾನವ ಜೀವಪರ ಮತ್ತು ಸಾಮಾಜಿಕ ಸಂಬಂಧದ ಸ್ವಭಾವದ ಮಜಲುಗಳ ಹುಡುಕಾಟ ನಡೆಯುತ್ತಲೆ ಬರುತ್ತಲಿದೆ. ದೇಶದ ಸ್ವಾತಂತ್ಯ್ರದ ಸ್ಥಾನದಲ್ಲಿ ಮಾನವತೆ, ಸಮಾನತೆಯ ಪರಿಕಲ್ಪನೆಯನ್ನು ಈ ಕಥಾ ಸಾಹಿತ್ಯ ಪ್ರತಿಪಾದಿಸುತ್ತಾ ಬಂದಿದೆ. 20ನೆ ಶತಮಾನದಲ್ಲಿ ಆರಂಭಗೊಂಡ ಈ ಕಥಾ ಸಾಹಿತ್ಯ ಇಂದು ಸಮೃದ್ಧವಾಗಿ ಬೆಳೆದು ಬಂದಿದೆ. ಕನ್ನಡದ ಗದ್ಯದ ಬಳಕೆಗೆ ಸುದೀರ್ಘ ಪರಂಪರೆ ಇದೆ. ಕಥೆಯ ವಿವರಣೆಗೆ, ವರ್ಣನೆ ಮತ್ತು ನಿರೂಪಣೆಗೆ ಗದ್ಯ ಅನಿವಾರ್ಯವಾಗಿದ್ದು ಅದು ಪ್ರಧಾನವಾಗಿಯೂ ಬಳಕೆಯಾಗಿದೆ. ಹೀಗಾಗಿ ಆರಂಭದಲ್ಲಿ ಸೃಷ್ಟಿಯಾದ ಕಥಾ ಸಾಹಿತ್ಯ ಆಯಾಯ ಪ್ರಾದೇಶಿಕ ಭಾಷಾ ಪ್ರಭೇದದಲ್ಲಿ ಕಾಣಿಸಿಕೊಂಡವು. ನವೋದಯ ಸಾಹಿತ್ಯದಲ್ಲಿ ಪ್ರಕಟವಾದ ಉತ್ಕಟ ಮಾದರಿಯ ಮತ್ತಷ್ಟು ವಿಸ್ತರಿಸಿಕೊಂಡದ್ದು ಪ್ರಗತಿಶೀಲ ಸಾಹಿತ್ಯದ ಪ್ರಮುಖ ಅಂಶವಾಗಿದೆ. ಇಲ್ಲಿ ಮುಖ್ಯವಾಗಿ ಲೇಖಕ ಮತ್ತು ಓದುಗರ ನಡುವಿನ ವಸ್ತರಿಸಿದ್ದು ಪ್ರಗತಿಶೀಲ ಮತ್ತು ದಲಿತ- ಬಂಡಾಯ ಸಾಹಿತ್ಯದ ಹೆಚ್ಚುಗಾರಿಕೆ ಎನ್ನಬಹುದು. ಸಮಾಜವಾದಿ ವಾಸ್ತವತೆ, ಸಮಾಕಾಲೀನ ವಿದ್ಯಮಾನಗಳ ಒತ್ತಡಗಳನ್ನು ಸೃಜನಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು. ಎಲ್ಲಾ ಕಾಲದ ಮೌಲಿಕ ಅಂಶಗಳು ಕತೆಗಳಲ್ಲಿ ಕಂಡು ಬರುತ್ತವೆ. ಕ್ರಿ.ಶ.1900 ರ ಆರಂಭದಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ನನ್ನ ಚಿಕ್ಕಪ್ಪ ಕಥೆ ಇದು ಆ ಕಾಲದ ಮೊದಲ ಕಥೆ. ಪಂಜೆಯವರ ಕಥೆಗಳು ನವೋದಯ ಸಾಹಿತ್ಯದ ಆರಂಭಿಕ ರಚನೆಗಳಾಗಿವೆ. ಕಥಾ ರಚನೆಗಳಲ್ಲಿ ಚಾರಿತ್ರಿಕ - ಸಾಮಾಜಿಕ ವಸ್ತುಗಳನ್ನು ಬಳಸಿಕೊಂಡು ಆ ಕಾಲಕ್ಕೆ ಕಥೆಗಳ ಮೂಲಕ ಮಂಗಳೂರು ಪ್ರಾತ್ಯದ ಕಡೆಗೆ ಹೊಸ ಪ್ರಯೋಗ ನಡೆಸಿದ ಮೊದಲ ಲೇಖಕರು ಎನ್ನಬಹುದು. ತದ ನಂತರ ಉತ್ತರ ಕರ್ನಾಟಕದಲ್ಲಿ ಕೆರೂರು ವಾಸುದೇವಾಚಾರ್ಯರು ಸಣ್ಣ ಕಥೆಗಳ ರಚನೆಯಲ್ಲಿ ತೊಡಗಿಸಿಕೊಂಡರು. ಕಥೆಗಳಲ್ಲಿ ಉತ್ತರ ಕರ್ನಾಟಕದ ಪ್ರಾದೇಶಿಕ ಭಾಷೆ, ಶೈಲಿ ಹಾಗೂ ತಂತ್ರವನ್ನು ಬಳಸಿದರು. ಕಥೆಗಳಲ್ಲಿ ಕಾಲ್ಪನಿಕವಾದ, ಐತಿಹಾಸಿಕವಾದ ಮತ್ತು ಸಾಮಾಜಿಕ ವಸ್ತು ವಿಶೇಷತೆಯನ್ನು ಕಟ್ಟಿಕೊಟ್ಟರು. ವಾಸುದೇವಾಚಾರ್ಯರ ಕಥೆ ಮಲ್ಲೇಶಿಯ ನಲ್ಲೆಯರು. ಇದೇ ಭಾಗದ ಆನಂದ ಕಂದರ ವರು ಹಳ್ಳಿಯ ಬದುಕಿನ ವಿವಿಧ ನಂಬಿಕೆ, ಆಚರಣೆ, ಐತಿಹ್ಯ, ತ್ಯಾಗ, ಬಲಿದಾನ, ವೀರಜೀವನ ಮುಂತಾದ ಸ್ಥಳೀಯ ಸಾಮಗ್ರಿಗಳನ್ನು ತಮ್ಮ ಕಥೆಗಳಿಗೆ ವಸ್ತುವನ್ನಾಗಿ ಸ್ವೀಕರಿಸಿದರು. ದಕ್ಷಿಣ ಕನ್ನಡದ ಶಿವಕಾರಂತರ ಚೋಮನದುಡಿ. ಗಲ್ವಾಡಿ ವೆಂಕಟರಾಯರು, ಎಂ.ಎಸ್.ಪುಟ್ಟಣ್ಣನವರು ತಮ್ಮ ತಮ್ಮ ಕೃತಿಗಳಲ್ಲಿ ಬಳಸಿದ ಗದ್ಯದ ಭಾಷೆಯೇ ಮುಂದೆ ಆಧುನಿಕ ಕನ್ನಡದ ಕಥೆಗಾರರಿಗೆ ಒಂದು ಮಾದರಿಯಾಯಿತು. ಮೈಸೂರ ಪ್ರಾಂತ್ಯದಲ್ಲಿ ಮಾಸ್ತಿ, ಕುವೆಂಪು ಮೊದಲಾದ ಲೇಖಕರು ಕನ್ನಡ ಭಾಷೆಗೆ ಪಾತ್ರಗಳ ಸಂಭಾಷಣೆಯ ಭಾಷೆ ಹಾಗೂ ಸನ್ನಿವೇಶ ನಿರ್ಮಾಣದ ಎಚ್ಚರದ ಚೌಕಟ್ಟನ್ನು ಮೀರಿ ಆಧುನಿಕ ಶೈಲಿಯ ಕಥಾ ಸಾಹಿತ್ಯ ನಿರ್ಮಿಸಿದರು. ಮಾಸ್ತಿಯವರು ಭಾರತೀಯ ಕಥಾ ಪರಂಪರೆಯ ಶಿಷ್ಟ ಹಾಗೂ ಜಾನಪದ ಎರಡರಿಮದಲೂ ಗಾಢವಾಗಿ ಪ್ರಭಾವಿತರಾಗಿದ್ದರು. ಇದರಿಂದಾಗಿಯೇ ಅವರ ಒಲವು ಮೌಖಿಕ ಪ್ರಕಾರಗಳತ್ತ ಹರಿಯಿತು. ಅವರು ಕತೆ ಕಟ್ಟಲಿಲ್ಲವೆಂದಲ್ಲ. ಆದರೆ ಕತೆ ಹೇಳುವುದರಲ್ಲಿಯೇ ಅವರಿಗೆ ನಿಜವಾದ ಆಸಕ್ತಿ ಇತ್ತು. ಪುರಾಣ, ಇತಿಹಾಸ, ಐತಿಹಾಸಿಕ, ದಾಖಲೆಗಳು, ದಂತಕಥೆಗಳು - ಇಂಥ ಹಲವಾರು ಆಕರಗಳಿಂದ ಅವರು ತಮ್ಮ ಕತೆಗಳಿಗೆ ವಸ್ತುವನ್ನಾಗಿಸಿಕೊಂಡರು. ಸ್ವಂತ ವ್ಯಕ್ತಿತ್ವ ಹಾಗೂ ಮಿತಿಗಳಿಂದ ಪಾರಾಗಿ ಬೇರೆ ಜೀವಿಗಳ ಬದಕಿನಲ್ಲಿಯೂ ಸೇರಿಕೊಳ್ಳುವ ಪರಕಾಯ ಪ್ರವೇಶ ವಿದ್ಯೆ ಕತೆಗಾರನಿಗೆ ಅವಶ್ಯವಾದುದು ಎಂಬ ನಂಬಿಕೆ ಅವರಲ್ಲಿತ್ತು. ಭಾರತೀಯ ಸಂಸ್ಕೃತಿಗಳಿಗೆ ಹೊಂದಿದ ಬದುಕಿನ ಬೇರೆ ಬೇರೆ ಸನ್ನಿವೇಶಗಳನ್ನು ಕತೆ ರಚನೆಯ ಮೂಲಕ ಮಾಸ್ತಿ ಶೋಧಿಸಿದರು.

Key Words

ಸಣ್ಣಕಥೆಗಳು, ಆಶಯ, ಸಾಮಾಜಿಕ ಚಿತ್ರಣ, ವಿಶ್ಲೇಷಣೆ ಬದುಕಿನ ಚಿತ್ರಣ, ಸಾಂಪ್ರದಾಯಿಕ ಮೌಲ್ಯಗಳು

Cite This Article

"ಮಾಸ್ರಿಯವರ ಆಯ್ದ ಸಣ್ಣಕಥೆಗಳ ಆಶಯ ಮತ್ತು ವಿಶ್ಲೇಷಣೆ", International Journal of Emerging Technologies and Innovative Research (www.jetir.org), ISSN:2349-5162, Vol.13, Issue 9, page no.a237-a244, September-2026, Available :http://www.jetir.org/papers/JETIR2609028.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ಮಾಸ್ರಿಯವರ ಆಯ್ದ ಸಣ್ಣಕಥೆಗಳ ಆಶಯ ಮತ್ತು ವಿಶ್ಲೇಷಣೆ", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.13, Issue 9, page no. ppa237-a244, September-2026, Available at : http://www.jetir.org/papers/JETIR2609028.pdf

Publication Details

Published Paper ID: JETIR2609028
Registration ID: 585668
Published In: Volume 13 | Issue 9 | Year September-2026
DOI (Digital Object Identifier):
Page No: a237-a244
Country: Chitradurga, Karnataka, India .
Area: Other
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

0007

Print This Page

Current Call For Paper

Jetir RMS