UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 5 | May 2024

JETIREXPLORE- Search Thousands of research papers



WhatsApp Contact
Click Here

Published in:

Volume 9 Issue 8
August-2022
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2208221


Registration ID:
501178

Page Number

c206-c215

Share This Article


Jetir RMS

Title

ಕುರುಮನ್ಸ್ ಬುಡಕಟ್ಟಿನ ಜೀವನಾವರ್ತಕ ಆಚರಣೆಗಳು

Authors

Abstract

ಕುರುಮನ್ಸ್ ಬುಡಕಟ್ಟಿನ ಜೀವನಾವರ್ತಕ ಆಚರಣೆಗಳು -ಶಿಲ್ಪ ಕೆ ಎಚ್ ಅಲೆಮಾರಿಯಾಗಿದ್ದ ಮಾನವ ಒಂದು ಅಂತದಲ್ಲಿ ನೆಲೆನಿಂತ. ಬೇಟೆ ಆಹಾರ ಸಂಗ್ರಹಣೆಯಿಂದ ಕೃಷಿಕಡೆಗೆ ವಾಲಿದ. ಅಲ್ಲಿ ನಾಗರೀಕರಣ ಬೆಳೆಯಲಾರಂಭಿಸಿತು. ಅಲೆಮಾರಿ ಮೂಲನಿವಾಸಿಯಿಂದ ಆಧುನಿಕ ತಂತ್ರಜ್ಞಾನದ ಜಗತ್ತಿನೊರೆಗೂ ಹೊಸತನಕ್ಕೆ ತನ್ನನ್ನು ಹೋಗ್ಗಿಕೊಂಡು ಬಂದಿದ್ದಾನೆ. ಪ್ರಪಂಚದ ಎಲ್ಲಾ ಜಾತಿ ಧರ್ಮಗಳು ಬುಡಕಟ್ಟು ಅವಸ್ಥೆಯಿಂದ ಮುಂದುವರೆದು ಹೋದಂತವುಗಳಾಗಿರುತ್ತವೆ. ಆದರೆ ಹೊಸತನಕ್ಕೆ ದೂರ ಉಳಿದು ಬದಲಾವಣೆಗಳನ್ನು ಅತಿ ಸುಲಬವಾಗಿ ಒಪ್ಪದ ಕೆಲ ಸಮುದಾಯಗಳು ಬುಡಕಟ್ಟು ಅವಸ್ಥೆಯಲ್ಲಿವೆ. ಬುಡಕಟ್ಟು ಎಂಬ ಪದವು ಮೂಲಿಗರು ಎಂದು ಅರ್ಥಕೊಡುತ್ತದೆ. ಬುಡ ಎಂದರೆ ಬೇರು, ಕಟ್ಟು ಎಂದರೆ ಕೂಟ ಒಟ್ಟಾರೆಯಾಗಿ ನೋಡಿದರೆ ಬೇರುಗಳ ಕೂಟ ಅಂದರೆ ಒಂದೇ ಬೇರಿನ ಕವಲುಗಳು, ಒಂದೇ ಕಳ್ಳುಬಳ್ಳಿಯವರು, ಮೂಲಿಗರೆಂಬರ್ಥ. ಇಂಗ್ಲೀಷಿನಲ್ಲಿ è mÉæöʨï ಎಂದು ಕರೆಯುತ್ತಾರೆ. Tribe ಎಂಬ ಪದವು ಲ್ಯಾಟಿನ್ ಪದ tribus ಎಂಬ ಪದದಿಂದ ಬಂದಿದೆ. ಟ್ರೈಬಗಳನ್ನು aboriginal ಎಂದು ಕರೆಯುತ್ತಾರೆ ಅಂದರೆ ಮೂಲನಿವಾಸಿಗರು ಅಥವಾ ಮೊದಲಿಗರೆಂಬ ಅರ್ಥವನ್ನು ಕೊಡುತ್ತದೆ. ಬುಡಕಟ್ಟು ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸಿ, ನಿರ್ಧಿಷ್ಟ ಭಾಷೆ ಮಾತನಾಡುವ, ಒಂದೇ ನಾಮದೇಯವನ್ನು ಹೊಂದಿರುವ, ಒಂದೇ ಆದಿದೈವ ಮೂಲ ಪುರುಷ ಇರುವ, ತನ್ನದೆಯಾದ ಕಟ್ಟು ಪಾಡುಗಳುಳ್ಳ, ವಿವಾಹ ಉದ್ಯೋಗಗಳಿಗೆ ಸಂಬಂಧಿಸಿದಂತೆ ಒಂದೇ ಬಗೆಯ ವಿಧಿ ನಿಷೇಧಗಳಿಗೆ ಬದ್ಧವಾಗಿ ಸ್ವತಂತ್ರ ಮತ್ತು ಅನ್ಯೂನ್ಯತೆಯಿಂದ ಬಾಳುವ ಸಮುದಾಯ. ವರ್ಣಾಶ್ರಮದ ನಂತರ ಕಸುಬುಗಳ ಆಧಾರದ ಮೇಲೆ ಜಾತಿಗಳು ಸೃಷ್ಠಿಯಾದವು. ಜಾತಿಗಳು ದೊಡ್ಡ ಪ್ರಮಾಮಾಣದಲ್ಲಿ ಬೆಳೆದು ಕೇವಲ ಕಸುಬಿಗೆ ಸೀಮಿತವಾಗದೆ ಒಂದು ಸಾಮಾಜಿಕ ಗುಂಪುಗಳಾಗಿ ಬಲಗೊಂಡವು. ವೃತ್ತಿಯಿಂದ ಜಾತಿಗಳ ಉಗಮವಾದರೂ ಪ್ರಸ್ತುತ ಸಂದರ್ಭದಲ್ಲಿ ಜಾತಿಗಳು ಒಬ್ಬ ವ್ಯಕ್ತಿಯ ಅಸ್ಥಿತ್ವವನ್ನು ತಿಳಿಸುತ್ತದೆ. ನೆಲೆ ಮೂಲ ತಿಳಿಯುವಲ್ಲಿ, ಸಂಸ್ಕೃತಿ ಅರ್ಥೈಸುವಲ್ಲಿ, ಸಂಬಂಧಗಳ, ಸಂಪ್ರದಾಯಗಳ, ರೂಢಿ ಆಚರಣೆಗಳ ಸಂಕೇತವಾಗಿ ಜಾತಿಗಳು ಬೆಳೆದು ನಿಂತಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸವಾದವರು ಜಾತಿಗಳಾಗಿ ನಂತರ ಧರ್ಮದ ಚೌಕಟ್ಟಿನೊಳಗೆ ಸೇರಿದವು. ಜಾತಿ ವ್ಯವಸ್ಥೆಗೆ ಸಿಲುಕದೆ ಕಾಡು ಮೇಡು ಬೆಟ್ಟ ಗುಡ್ಡಗಳಲ್ಲಿದ್ದ ಸಮುದಾಯಗಳು ಬುಡಕಟ್ಟುಗಳಾಗಿ ಅಲೆಮಾರಿಗಳಾದವು. ಇವರು ಕಡಿಮೆ ಜನ ಸಂಖ್ಯೆಯುಳ್ಳ ವಿಭಿನ್ನ ಭಾಷೆ ಮಾತನಾಡುವ ವಿಶೀಷ್ಟ ಸಂಸ್ಕೃತಿಯನ್ನು ಹೊಂದಿರುವ ಆದಿಮ ಸ್ಥಿತಿಯಲ್ಲಿರು ಗುಂಪುಗಳಾದವು. ಬುಡಕಟ್ಟಗಳು ಆಧುನಿಕ ಸಮಾಜದಿಂದ ಹೊರಗುಳಿದ ಕಾರಣ ಇಂದಿಗೂ ಕೂಡ ಮೂಲ ಆಚರಣೆಗಳನ್ನು ಉಳಿಸಿಕೊಂಡು ಬಂದಿವೆ. ಹುಟ್ಟಿನಿಂದ ಸಾವಿನವರೆಗೂ ಎಲ್ಲಾ ಆಚರಣೆಗಳಲ್ಲಿ ತನ್ನದೇಯಾದ ವಿಶಿಷ್ಟತೆ ಉಳಿಕೊಂಡು ತನ್ನ ಅಸ್ಮಿತೆಯನ್ನು ತೋರುತ್ತದೆ. ಅಂತಹ ವಿಶೇಷ ಆಚರಣೆಗಳನ್ನು ಹೊಂದಿರುವ ಕುರುಮನ್ಸ್ ಬುಡಕಟ್ಟಿನ ಸಂಪ್ರದಾಯಗಳನ್ನು ಅನಾವರ್ಣಮಾಡುವ ಪ್ರಯತ್ನ ಪ್ರಸ್ತುತ ಲೇಖನದ ಉದ್ದೇಶವಾಗಿದೆ. ಈ ಲೇಖನವನ್ನು ಕ್ವೇತ್ರಕಾರ್ಯದಲ್ಲಿ ದೊರೆತ ನೇರ ಮಾಹಿತಿಯಿಂದ ರಚಿಸಲಾಗಿದೆ. ಪ್ರಶ್ನಾವಳಿ, ಸಂಧರ್ಶನ, ಸಹಭಾಗಿತ್ವ ಅವಲೋಕನ ದಿಂದ ಮಾಹಿತಿ ಕಲೆಯಾಕಲಾಗಿದೆ.

Key Words

ಕುರುಮನ್ಸ್ , ಜೀವನಾವರ್ತಕ ಆಚರಣೆಗಳು

Cite This Article

"ಕುರುಮನ್ಸ್ ಬುಡಕಟ್ಟಿನ ಜೀವನಾವರ್ತಕ ಆಚರಣೆಗಳು", International Journal of Emerging Technologies and Innovative Research (www.jetir.org), ISSN:2349-5162, Vol.9, Issue 8, page no.c206-c215, August-2022, Available :http://www.jetir.org/papers/JETIR2208221.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"ಕುರುಮನ್ಸ್ ಬುಡಕಟ್ಟಿನ ಜೀವನಾವರ್ತಕ ಆಚರಣೆಗಳು", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.9, Issue 8, page no. ppc206-c215, August-2022, Available at : http://www.jetir.org/papers/JETIR2208221.pdf

Publication Details

Published Paper ID: JETIR2208221
Registration ID: 501178
Published In: Volume 9 | Issue 8 | Year August-2022
DOI (Digital Object Identifier):
Page No: c206-c215
Country: hosapete, karnataka, India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000119

Print This Page

Current Call For Paper

Jetir RMS